ದೆಹಲಿ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ರವೀಂದ್ರ ಜಡೇಜಾಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಊಟದ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿರುವ ಲಂಕಾ ಪಂದ್ಯ ಉಳಿಸಿಕೊಳ್ಳಲು ಹೋರಾಡುತ್ತಿದೆ.
ಅಂತಿಮ ದಿನವಾದ ಇಂದು 410 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಲಂಕಾ ಮೊದಲ ಅವಧಿಯಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡಿದೆ. ಊಟದ ವಿರಾಮಕ್ಕಿಂತ ಮೊದಲ ಓವರ್ ನಲ್ಲಿ ಲಂಕಾ ನಾಯಕ ಚಂಡಿಮಾಲ್ ಇನ್ನೇನು ಔಟ್ ಆಗಲಿದ್ದರು. ಆದರೆ ಜಡೇಜಾ ಎಸೆದ ಆ ಎಸೆತ ನೋ ಬಾಲ್ ಆಗಿತ್ತು.
ಮೂರನೇ ಅಂಪಾಯರ್ ಇದನ್ನು ದೃಢಪಡಿಸಿದರು. ಇದರೊಂದಿಗೆ ಚಂಡಿಮಾಲ್ ಬಚವಾದರು. ಅಷ್ಟೇ ಅಲ್ಲ, ಲಂಕಾಗೆ ದೊಡ್ಡ ಹೊಡೆತವೊಂದು ತಪ್ಪಿ ಹೋಯಿತು. ಇದೀಗ ಚಂಡಿಮಾಲ್ 27 ರನ್ ಗಳಿಸಿದ್ದರೆ, ಇನ್ನೊಂದು ತುದಿಯಲ್ಲಿ ಅರ್ಧಶತಕ ಗಳಿಸಿರುವ ಧನಂಜಯ ಡಿಸಿಲ್ವ 72 ರನ್ ಗಳಿಸಿದ್ದಾರೆ. ಲಂಕಾಗೆ ಗೆಲುವಿಗೆ ಇನ್ನು 291 ರನ್ ಗಳ ಅಗತ್ಯವಿದೆ. ಆದರೆ ಜಿಗುಟಿನ ಆಟವಾಡುತ್ತಿರುವ ಲಂಕಾ ಭಾರತಕ್ಕೆ ಆತಂಕ ಉಂಟುಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ