Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವಾಯು ಮಾಲಿನ್ಯದ ಪರಿಣಾಮ ಲಂಕಾ ಕ್ರಿಕೆಟಿಗರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಇಂದೂ ಕೂಡಾ ಅದು ಮುಂದುವರಿಯಿತು.
ಭಾನುವಾರ ಫೀಲ್ಡಿಂಗ್ ಮಾಡುತ್ತಿದ್ದಾಗ ಲಂಕಾ ಸುಮಾರು 20 ನಿಮಿಷಗಳ ಕಾಲ ಆಟ ನಿಲ್ಲಿಸಿತು. ಆಟಗಾರರು ಮಾಸ್ಕ್ ಹಾಕಿಕೊಂಡು ಆಡುತ್ತಿದ್ದರು. ಇಂದು ಮತ್ತೆ ಫೀಲ್ಡಿಂಗ್ ಮಾಡಲು ಇಳಿದ ಲಂಕಾ ಕ್ರಿಕೆಟಿಗರು ಮತ್ತೆ ಉಸಿರಾಟದ ಸಮಸ್ಯೆ ಎದುರಿಸಿದರು.
ಮೊನ್ನೆ ಮೈದಾನದಲ್ಲಿ ವಾಂತಿ ಮಾಡಿಕೊಂಡಿದ್ದ ಲಕ್ಮಲ್ ಇಂದು ಮತ್ತೆ ಓವರ್ ನಡುವೆ ಬಳಲಿದವರಂತಾಗಿ ವಾಂತಿ ಮಾಡಿಕೊಂಡರು. ಏನೇ ಆದರೂ ದೆಹಲಿ ವಾಯು ಮಾಲಿನ್ಯದಿಂದಾಗಿ ಬಿಸಿಸಿಐ ವ್ಯಾಪಕ ಟೀಕೆಗೆ ಗುರಿಯಾಗಿರುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ