ಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಐದು ವಿಕೆಟ್ ಗಳ ಗೊಂಚಲು ಪಡೆದ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಲವು ದಾಖಲೆಗಳನ್ನು ಮಾಡಿದ್ದಾರೆ. ಅವು ಯಾವುವು ನೋಡೋಣ.
ತೇಜ್ ನರೈನ್ ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ಈ ಮೊದಲು ಅವರ ತಂದೆ ಶಿವನಾರಾಯಣ್ ಚಂದ್ರಪಾಲ್ ವಿಕೆಟ್ ನ್ನೂ ಪಡೆದಿದ್ದರು. ಇದರೊಂದಿಗೆ ಅಪ್ಪ-ಮಗ ಇಬ್ಬರ ವಿಕೆಟ್ ನ್ನೂ ಪಡೆದ ಅಪರೂಪದ ಬೌಲರ್ ಗಳ ಪಟ್ಟಿಯಲ್ಲಿ ಐದನೆಯವರೆನಿಸಿಕೊಂಡರು.
ವಿಂಡೀಸ್ ನಾಯಕ ಕ್ರೆಗ್ ಬ್ರಾತ್ ವೈಟ್ ವಿಕೆಟ್ ಪಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಶ್ವಿನ್ 700 ವಿಕೆಟ್ ನೇ ಬಲಿ ಪಡೆದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 700 ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇನಿಂಗ್ಸ್ ಒಂದರಲ್ಲಿ ಗರಿಷ್ಠ ಬಾರಿ ಐದು ವಿಕೆಟ್ ಪಡೆದ ಮೊದಲ ಸಕ್ರಿಯ ಬೌಲರ್ ಎನಿಸಿಕೊಂಡರು. 93 ಟೆಸ್ಟ್ ಗಳಿಂದ 33 ನೇ ಬಾರಿ ಅಶ್ವಿನ್ 5 ವಿಕೆಟ್ ಪಡೆದರು. ಈ ಮೂಲಕ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕಿದರು. ಅಲ್ಲದೆ ವಿಂಡೀಸ್ ವಿರುದ್ಧ ಐದನೇ ಬಾರಿಗೆ 5 ವಿಕೆಟ್ ಸಾಧನೆ ಮಾಡಿದರು.