ಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಾದ ಬಳಿಕ ಏಕದಿನ ಸರಣಿ ಆರಂಭವಾಗಲಿದೆ.
ಈ ಎರಡೂ ಸರಣಿಗಳಲ್ಲಿ ಕಿಂಗ್ ಕೊಹ್ಲಿ ಆಡಲಿದ್ದಾರೆ. ಪ್ರತೀ ಬಾರಿ ಕೊಹ್ಲಿ ಕಣಕ್ಕಿಳಿದಾಗ ಒಂದಿಲ್ಲೊಂದು ದಾಖಲೆಯಾಗೇ ಆಗುತ್ತದೆ. ಈ ಬಾರಿಯೂ ವಿಂಡೀಸ್ ಪ್ರವಾಸದಲ್ಲಿ ಅವರು ಮೂರು ದಾಖಲೆಗಳನ್ನು ಮಾಡುವ ಸಾಧ‍್ಯತೆಯಿದೆ.
ಈ ಸರಣಿಯಲ್ಲಿ ಅವರು ಒಂದು ಶತಕ ಗಳಿಸಿದರೂ ವಿಂಡೀಸ್ ವಿರುದ್ಧ ಗರಿಷ್ಠ ಶತಕ ಗಳಿಸಿದ ದಾಖಲೆ ಮಾಡಲಿದ್ದಾರೆ. 11 ಶತಕ ಗಳಿಸಿರುವ ಕೊಹ್ಲಿ ಇನ್ನು ಒಂದು ಶತಕ ಗಳಿಸಿದರೆ ಸುನಿಲ್ ಗವಾಸ್ಕರ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ವಿಂಡೀಸ್ ವಿರುದ್ಧ ಟೆಸ್ಟ್ ನಲ್ಲಿ ಕೊಹ್ಲಿ 1365 ರನ್ ಗಳಿಸಿದ್ದು, ದ್ರಾವಿಡ್ ಗಳಿಸಿರುವ 1838 ರನ್ ಗಳ ದಾಖಲೆ ಮುರಿಯಬಹುದಾಗಿದೆ. ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ವಿಂಡೀಸ್ ವಿರುದ್ಧ 3653 ರನ್ ಗಳಿಸಿರುವ ಕೊಹ್ಲಿ ವಿಂಡೀಸ್ ವಿರುದ್ಧ ಗರಿಷ್ಠ ರನ್ ಗಳಿಸಿದ ವಿಶ್ವ ದಾಖಲೆ ಮಾಡಬಹುದಾಗಿದೆ. ಇದೀಗ ಆ ದಾಖಲೆ ದ.ಆಫ್ರಿಕಾದ ಜ್ಯಾಕಸ್ ಕ್ಯಾಲಿಸ್ ಹೆಸರಲ್ಲಿದ್ದು ಅವರು 4,120 ರನ್ ಗಳಿಸಿದ್ದಾರೆ.