Publish Date: Sun, 19 Dec 2021 (08:45 IST)
Updated Date: Sun, 19 Dec 2021 (08:59 IST)
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಲೀಸ್ ಆಗಿ ಹರಾಜಿಗೊಳಗಾಗಲಿರುವ ಆಟಗಾರರ ಪಟ್ಟಿಯಲ್ಲಿರುವ ರವಿಚಂದ್ರನ್ ಅಶ್ವಿನ್ ಮರಳಿ ತಮ್ಮ ತವರು ಸಿಎಸ್ ಕೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ. ಅಶ್ವಿನ್ ಈ ಮೊದಲು ಸಿಎಸ್ ಕೆ ತಂಡದಿಂದಲೇ ಟೀಂ ಇಂಡಿಯಾಗೆ ಪರಿಚಯವಾದವರು. ಆದರೆ ಬಳಿಕ ಅವರನ್ನು ಚೆನ್ನೈ ಹರಾಜಿಗಿಳಿಸಿತ್ತು. ಅದರಂತೆ ಅಶ್ವಿನ್ ಪಂಜಾಬ್, ಡೆಲ್ಲಿ ತಂಡದ ಪರ ಆಡಿದ್ದರು.
ಇದೀಗ ಸೀಮಿತ ಓವರ್ ಗಳಲ್ಲಿ ಮಿಂಚುತ್ತಿರುವ ಅಶ್ವಿನ್ ರನ್ನು ಸಿಎಸ್ ಕೆ ಮರಳಿ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ ಎನ್ನಲಾಗಿದೆ. ಜನವರಿಯಲ್ಲಿ ಮೆಗಾ ಹರಾಜು ನಡೆಯಲಿದ್ದು, ಅಶ್ವಿನ್ ಸಿಎಸ್ ಕೆ ತಂಡ ಸೇರಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.