Publish Date: Fri, 13 Aug 2021 (12:05 IST)
Updated Date: Fri, 13 Aug 2021 (09:25 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ರನ್ನು ತಂಡದಿಂದ ಹೊರಗಿಟ್ಟಾಗ ಫ್ಯಾನ್ಸ್ ಗರಂ ಆಗಿದ್ದರು.
ಆದರೆ ಎರಡನೇ ಟೆಸ್ಟ್ ನಲ್ಲಾದರೂ ಅವಕಾಶ ಸಿಗಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಎರಡನೇ ಟೆಸ್ಟ್ ನಲ್ಲೂ ಅಶ್ವಿನ್ ರನ್ನು ಹೊರಗಿಡಲಾಗಿದ್ದು, ಏಕೈಕ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾಗೆ ಅವಕಾಶ ನೀಡಲಾಗಿದೆ.
ಇಂಗ್ಲೆಂಡ್ ಹೇಳಿ ಕೇಳಿ ವೇಗಿಗಳಿಗೆ ಹೇಳಿ ಮಾಡಿಸಿದ ಪಿಚ್ ನಿರ್ಮಿಸುತ್ತದೆ. ಇದೇ ಕಾರಣಕ್ಕೆ ವೇಗಿಗಳಿಗೆ ಮಣೆ ಹಾಕಲಾಗಿದೆ. ಆದರೆ ಹಿರಿಯ, ಅನುಭವಿ ಆಟಗಾರನನ್ನು ಹೊರಗಿಟ್ಟು ಅಭಿಮಾನಿಗಳಿಗೆ ಇಷ್ಟವಾಗಿಲ್ಲ.