ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಪ್ರಥಮ ಬಾಲ್ ಗೇ ಔಟಾಗಿ ಬೇಡದ ದಾಖಲೆ ಮಾಡಿದ ಕೆಎಲ್ ರಾಹುಲ್ ಗೆ ಸುನಿಲ್ ಗವಾಸ್ಕರ್ ಸ್ವಾಗತ ಮಾಡಿದ್ದಾರೆ.
ಗವಾಸ್ಕರ್ ಈ ಕುಖ್ಯಾತಿಯ ದಾಖಲೆಯನ್ನು ಮೂರು ಬಾರಿ ಮಾಡಿದ್ದರು. ಹೀಗಾಗಿ ತಮ್ಮ ಕ್ಲಬ್ ಗೆ ಸೇರಿದ್ದಕ್ಕೆ ಅಭಿನಂದನೆಗಳು ಎಂದು ಸುನಿಲ್ ಗವಾಸ್ಕರ್ ತಮಾಷೆಯಾಗಿ ಸ್ವಾಗತ ಮಾಡಿದ್ದಾರೆ.
ಕೆಎಲ್ ರಾಹುಲ್ ಲಕ್ಮಲ್ ಬಾಲ್ ನಲ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ, ಈ ರೀತಿ ಔಟಾದ ಆರನೇ ಬ್ಯಾಟ್ಸ್ ಮನ್ ಎಂಬ ಕುಖ್ಯಾತಿಗೆ ಒಳಗಾದರು. ವಿಶೇಷವೆಂದರೆ 2007 ರ ನಂತರ ಈ ಅಪಕೀರ್ತಿಯ ದಾಖಲೆ ಮಾಡಿದ ಭಾರತೀಯರು ಯಾರೂ ಇರಲಿಲ್ಲ. ಕೊನೆಯ ಬಾರಿ ಈ ಅಪಕೀರ್ತಿಗೆ ಒಳಗಾಗಿದ್ದು ವಾಸಿಂ ಜಾಫರ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ