Publish Date: Mon, 17 Jul 2023 (09:19 IST)
Updated Date: Mon, 17 Jul 2023 (09:21 IST)
ಮುಂಬೈ: ಸತತ ಕ್ರಿಕೆಟ್ ನಿಂದ ಬಳಲಿರುವ ಆಟಗಾರರಿಗೆ ನಿಯಮಿತವಾಗಿ ವಿಶ್ರಾಂತಿ ನೀಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ಕೋಚ್ ಗಳಿಗೂ ಈ ನಿಯಮ ಅನ್ವಯಿಸುತ್ತಿದೆ.
ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಗೆ ಈಗ ವಿಶ್ರಾಂತಿ ಯೋಗ! ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಮುಗಿಸಿ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಮಾಡಲಿದೆ. ಆಗಸ್ಟ್ ನಲ್ಲಿ ಐರ್ಲೆಂಡ್ ನಲ್ಲಿ ಟಿ20 ಸರಣಿ ನಡೆಯಲಿದೆ.
ಈ ಸರಣಿ ಆಗಸ್ಟ್ 18, 20 ಮತ್ತು 23 ರಂದು ನಡೆಯಲಿದೆ. ಈ ಸರಣಿಯಿಂದ ಕೋಚ್ ರಾಹುಲ್ ದ್ರಾವಿಡ್ ಹೊರಗುಳಿಯಲಿದ್ದಾರೆ. ಕೇವಲ ದ್ರಾವಿಡ್ ಮಾತ್ರವಲ್ಲ, ಅವರ ಸಹಾಯಕ ಸಿಬ್ಬಂದಿಗಳಿಗೂ ವಿಶ್ರಾಂತಿ ನೀಡಲಾಗುತ್ತದೆ. ಅವರ ಬದಲು ವಿವಿಎಸ್ ಲಕ್ಷ್ಮಣ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸರಣಿಗೆ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.