Publish Date: Sun, 16 Jul 2023 (16:44 IST)
Updated Date: Sun, 16 Jul 2023 (16:46 IST)
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಚೇತರಿಸಿಕೊಳ್ಳುತ್ತಿದ್ದು, ಇದೀಗ ದಿನಕ್ಕೆ 10 ಓವರ್ ಬೌಲಿಂಗ್ ನಡೆಸುತ್ತಿದ್ದಾರೆ.
ಬೆನ್ನು ನೋವಿನಿಂದಾಗಿ ಬುಮ್ರಾ ಕಳೆದ ಒಂದು ವರ್ಷದಿಂದ ಕ್ರಿಕೆಟ್ ಕಣಕ್ಕಿಳಿದಿರಲಿಲ್ಲ. ಮಹತ್ವದ ಟೂರ್ನಿಗಳಲ್ಲಿ ಬುಮ್ರಾ ಅನುಪಸ್ಥಿತಿ ಟೀಂ ಇಂಡಿಯಾಗೆ ಕಾಡುತ್ತಿದೆ.
ಇದೀಗ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬುಮ್ರಾ ಶೀಘ‍್ರದಲ್ಲೇ ತಂಡಕ್ಕೆ ಮರಳುವ ಸೂಚನೆ ನೀಡಿದ್ದಾರೆ. ದಿನಕ್ಕೆ 10 ಓವರ್ ಗಳಷ್ಟು ಬೌಲಿಂಗ್ ನಡೆಸುತ್ತಿದ್ದು ಏಷ್ಯಾ ಕಪ್ ಗೂ ಮುನ್ನ ತಂಡ ಸೇರಿಕೊಳ್ಳುವ ಶುಭ ಸೂಚನೆ ನೀಡಿದ್ದಾರೆ.