Publish Date: Sat, 21 Sep 2019 (09:57 IST)
Updated Date: Sat, 21 Sep 2019 (09:59 IST)
ಬೆಂಗಳೂರು: ಫಾರ್ಮ್ ಕಳೆದುಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ನೆರವಿಗೆ ಎನ್ ಸಿಎ ಅಧ್ಯಕ್ಷರೂ ಆಗಿರುವ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ನೆರವಿಗೆ ಧಾವಿಸಿದ್ದಾರೆ.
ನಾಳೆ ದ.ಆಫ್ರಿಕಾ ವಿರುದ್ಧ ಟಿ20 ಪಂದ್ಯ ನಡೆಯಲಿರುವುದರಿಂದ ಟೀಂ ಇಂಡಿಯಾ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದೆ. ಇಲ್ಲಿ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿರುವಾಗ ದ್ರಾವಿಡ್ ಭೇಟಿ ನೀಡಿದ್ದಾರೆ.
ಈ ವೇಳೆ ದ್ರಾವಿಡ್ ವಿಶೇಷವಾಗಿ ಪಂತ್ ಮತ್ತು ರಾಹುಲ್ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ಕೊಟ್ಟಿದ್ದಾರೆ. ಪಂತ್ ನೆಟ್ ಪ್ರಾಕ್ಟೀಸ್ ಮಾಡುತ್ತಿರುವಾಗ ಪಕ್ಕದಲ್ಲೇ ನಿಂತು ಸಲಹೆ ಸೂಚನೆ ನೀಡಿದ್ದಾರೆ. ಇವರಿಬ್ಬರೂ ದ್ರಾವಿಡ್ ಗರಡಿಯಲ್ಲೇ ಪಳಗಿದ ಆಟಗಾರರು. ಹೀಗಾಗಿ ತಮ್ಮಿಬ್ಬರು ಶಿಷ್ಯಂದಿರ ಬ್ಯಾಟಿಂಗ್ ವೈಫಲ್ಯ ಸರಿಪಡಿಸಲು ಸ್ವತಃ ದ್ರಾವಿಡ್ ಗಮನಕೇಂದ್ರೀಕರಿಸಿದ್ದಾರೆ.