ರಾಜ್ ಕೋಟ್: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಸ್ಥಾನ ಪಡೆಯುತ್ತಿರುವ ಪ್ರತಿಯೊಬ್ಬ ಕ್ರಿಕೆಟಿಗನೂ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ ಬರುತ್ತಿರುವವರೇ. ಅಂತಹ ಮತ್ತೊಬ್ಬ ಪ್ರತಿಭೆ ಪೃಥ್ವಿ ಶಾ ರೂಪದಲ್ಲಿ ಇಂದು ಟೀಂ ಇಂಡಿಯಾಕ್ಕೆ ಸಿಕ್ಕಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಶತಕ ಗಳಿಸಿದ ಪೃಥ್ವಿ ಶಾ ಆಟದ ಹಿಂದೆ ದ್ರಾವಿಡ್ ಪ್ರಭಾವ ಖಂಡಿತಾ ಇದೆ. ಶಿಷ್ಯನ ಆಟ ನೋಡಿ ದ್ರಾವಿಡ್ ಖಂಡಿತಾ ಹೆಮ್ಮೆಪಟ್ಟಿರುತ್ತಾರೆ. ಭಾರತ ಎ ತಂಡದ ಕೋಚ್ ಆಗಿ ದ್ರಾವಿಡ್ ಪ್ರಭಾವ ಇಂದಿನ ಎಲ್ಲಾ ಯುವ ಆಟಗಾರರಲ್ಲಿದೆ.
ಇದೇ ಕಾರಣಕ್ಕೆ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಆಡಿದ ರೀತಿ ನೋಡಿ ಎಲ್ಲರೂ ದ್ರಾವಿಡ್ ರನ್ನು ಹೊಗಳುತ್ತಿದ್ದಾರೆ. ಒಂದು ಕಾಲದ ರನ್ ಮೆಷಿನ್ ಇಂದು ಟ್ಯಾಲೆಂಟ್ ಮೆಷಿನ್ ಎಂದು ಒಬ್ಬರು ಹೊಗಳಿದರೆ ಇನ್ನೊಬ್ಬರು ಪೃಥ್ವಿ ಶಾರನ್ನು ದೇಶೀಯ ಕ್ರಿಕೆಟ್ ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ತಲುಪಿಸಿದ ಕೀರ್ತಿ ದ್ರಾವಿಡ್ ಗೆ ಸಲ್ಲಬೇಕು ಎಂದಿದ್ದಾರೆ. ಮತ್ತೆ ಕೆಲವರು ಪೃಥ್ವಿ ಶಾ ದ್ರಾವಿಡ್ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಎಂದು ಕೊಂಡಾಡಿದ್ದಾರೆ. ಅಂತೂ ಕ್ರಿಕೆಟಿಗನಾಗಿ ತಂಡದಲ್ಲಿದ್ದಾಗಲೂ ವಾಲ್ ಎಂದು ಹೊಗಳಿಸಿಕೊಂಡಿದ್ದ ದ್ರಾವಿಡ್ ಈಗ ಶ್ರೇಷ್ಠ ಕೋಚ್ ಆಗಿ ಮಿಂಚುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.