ನವದೆಹಲಿ: ತಾವು ಆಡುತ್ತಿದ್ದ ದಿನಗಳಲ್ಲಿ ವೀರೇಂದ್ರ ಸೆಹ್ವಾಗ್ ಫಿಯರ್ ಲೆಸ್ ಕ್ರಿಕೆಟ್ ಗೆ ಹೆಸರುವಾಸಿ. ಯಾವುದೇ ಫಾರ್ಮ್ಯಾಟ್ ಇರಲಿ, ಬಾಲ್ ಬರುವುದೇ ಚಚ್ಚಲು ಎನ್ನುವ ಥಿಯರಿ ಸೆಹ್ವಾಗ್ ರದ್ದು.
ಇಂತಿಪ್ಪ ಸೆಹ್ವಾಗ್ ತಮ್ಮ ವೃತ್ತಿ ಜೀವನದಲ್ಲಿ ಭಯಪಡುತ್ತಿದ್ದುದು ಒಬ್ಬನೇ ಒಬ್ಬ ಬೌಲರ್ ಗೆ ಅಂತೆ. ಅವರು ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್!
ವಿಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ ಸೆಹ್ವಾಗ್ ಈ ವಿಷಯ ಬಹಿರಂಪಡಿಸಿದ್ದಾರೆ. ‘ಅಖ್ತರ್ ಬೌಲಿಂಗ್ ಮಾಡುವಾಗ ಯಾವ ಬಾಲ್ ಯಾವಾಗ ತಲೆಗೆ ಬೀಳುತ್ತದೋ, ಕಾಲಿಗೆ ತಗುಲುತ್ತದೋ ಎಂದು ಭಯವಾಗುತ್ತಿತ್ತು. ಆದರೆ ಅವರಿಗೆ ಬಾರಿಸಲೂ ಖುಷಿಯಾಗುತ್ತಿತ್ತು’ ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.