ರಾಜ್ ಕೋಟ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಡಕ್ ಔಟ್ ಆಗಿ ಕೆಎಲ್ ರಾಹುಲ್ ನಿರಾಸೆ ಮೂಡಿಸಿದರೆ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಪೃಥ್ವಿ ಶಾ ಶತಕದ ಭರವಸೆ ಮೂಡಿಸಿದ್ದಾರೆ.
ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಮತ್ತು ಪೃಥ್ವಿ ಶಾ ಇಂದು ಆರಂಭಿಕರಾಗಿ ಕಣಕ್ಕಿಳಿದರು. ಆದರೆ ರಾಹುಲ್ ಭಾರತದ ಸ್ಕೋರ್ 3 ರನ್ ಆಗುವಾಗಲೇ ನಿರ್ಗಮಿಸಿದರು. ಮತ್ತೆ ಬೇಡದ ರಿವ್ಯೂ ಪಡೆದು ಅವರು ಅಭಿಮಾನಿಗಳಿಂದ ಟೀಕೆಗೂ ಒಳಗಾದರು.
ಆದರೆ ಅವರ ನಿರ್ಗಮನದ ನಂತರ ಚೇತೇಶ್ವರ ಪೂಜಾರ ಜತೆಗೂಡಿದ ಯುವ ಪೃಥ್ವಿ ಶಾ ಭರವಸೆಯ ಆಟವಾಡುತ್ತಿದ್ದು, 85 ರನ್ ಗಳಿಸಿದ್ದು ಶತಕದ ಹಾದಿಯಲ್ಲಿದ್ದಾರೆ. ಪೂಜಾರ 60 ರನ್ ಗಳಿಸಿದ್ದಾರೆ. ಇದೀಗ ವೇಳೆಗೆ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.