Publish Date: Wed, 30 Dec 2020 (10:21 IST)
Updated Date: Wed, 30 Dec 2020 (10:23 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಎರಡೂ ಟೆಸ್ಟ್ ಗಳಲ್ಲಿ ವಿಫಲರಾಗಿರುವ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ಸಮಸ್ಯೆಯೇನೆಂದು ಕೇಳಿದ್ದಕ್ಕೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ತಕ್ಕ ಉತ್ತರ ನೀಡಿದ್ದಾರೆ.
ಮಯಾಂಕ್ ಮತ್ತು ಪೂಜಾರ ಸಮಸ್ಯೆ ಏನೆಂದು ಬ್ಯಾಟಿಂಗ್ ಕೋಚ್ ಗೇ ಗೊತ್ತು. ತಂಡದಲ್ಲಿ ಒಬ್ಬ ಬ್ಯಾಟಿಂಗ್ ಕೋಚ್ ಎಂದು ನೇಮಕ ಮಾಡಿಟ್ಟುಕೊಂಡಿಲ್ಲವೇ? ಈ ಇಬ್ಬರೂ ಆ ವ್ಯಕ್ತಿಯನ್ನೇ ಹೋಗಿ ತಮ್ಮ ಸಮಸ್ಯೆ ಏನೆಂದು ಕೇಳಿ ಸರಿಪಡಿಸಿಕೊಳ್ಳಬೇಕು. ಯಾಕೆ ಇವರಿನ್ನೂ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಬಳಿ ಹೋಗಿಲ್ಲವೇ? ಎಂದು ಗವಾಸ್ಕರ್ ವ್ಯಂಗ್ಯವಾಗಿ ತಮಾಷೆ ಮಾಡಿದ್ದಾರೆ.