ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದೆ.
ರವೀಂದ್ರ ಜಡೇಜಾ 7, ಶ್ರಾದ್ಧೂಲ್ ಠಾಕೂರ್ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಇದಕ್ಕೂ ಮೊದಲು ನಿನ್ನೆ ಅಜೇಯರಾಗುಳಿದಿದ್ದ ಚೇತೇಶ್ವರ ಪೂಜಾರ ಇಂದು ಉತ್ತಮ ಇನಿಂಗ್ಸ್ ಆಡಿ 66 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರಿಷಬ್ ಪಂತ್ 57 ರನ್ ಗಳಿಸಿ ಔಟಾದರು. ಇವಿರಬ್ಬರ ಉತ್ತಮ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ಇದೀಗ 334 ರನ್ ಗಳಿಗೆ ಮುನ್ನಡೆ ವಿಸ್ತರಿಸಿದೆ.
ಶ್ರೇಯಸ್ ಅಯ್ಯರ್ ದ್ವಿತೀಯ ಇನಿಂಗ್ಸ್ ನಲ್ಲೂ ವಿಫಲರಾಗಿದ್ದು 19 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಪರ ಮೊದಲ ಇನಿಂಗ್ಸ್ ನಲ್ಲಿ ದುಬಾರಿ ಓವರ್ ಎಸೆದಿದ್ದ ಸ್ಟುವರ್ಟ್ ಬ್ರಾಡ್ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ಕಬಳಿಸಿದ್ದಾರೆ. ಇದೀಗ ಜಡೇಜಾ ಆಧಾರವಾಗಿ ನಿಂತು ಬಾಲಂಗೋಚಿಗಳ ಸಹಾಯದಿಂದ 400 ರ ಆಸುಪಾಸು ತಂಡದ ಮೊತ್ತ ದಾಟಿಸಿದರೆ ಭಾರತಕ್ಕೆ ಲಾಭವಾಗಲಿದೆ.