Publish Date: Mon, 04 Jul 2022 (08:45 IST)
Updated Date: Mon, 04 Jul 2022 (09:30 IST)
ಮುಂಬೈ: ತೊಡೆಸಂಧು ನೋವಿನಿಂದ ಬಳಲುತ್ತಿದ್ದ ಕ್ರಿಕೆಟಿಗ ಕೆಎಲ್ ರಾಹುಲ್ ಇತ್ತೀಚೆಗೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಇದೀಗ ಜರ್ಮನಿಯಲ್ಲಿ ರಾಹುಲ್ ಸುಧಾರಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ರಾಹುಲ್ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕು. ಹೀಗಾಗಿ ಕೆಲವು ಸಮಯ ಅವರು ಕ್ರಿಕೆಟ್ ನಿಂದ ಅನಿವಾರ್ಯವಾಗಿ ದೂರವುಳಿಯಬೇಕಾಗುತ್ತದೆ.