Publish Date: Tue, 20 Jul 2021 (09:55 IST)
Updated Date: Tue, 20 Jul 2021 (09:57 IST)
ಕೊಲೊಂಬೋ: ಟೀಂ ಇಂಡಿಯಾ ಆರಂಭಿಕ ಪೃಥ್ವಿ ಶಾ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರ ಬಗ್ಗೆ ಅವರ ರೂಮರ್ಡ್ ಗರ್ಲ್ ಫ್ರೆಂಡ್ ಪ್ರಚಿ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಪೃಥ್ವಿ ಶಾ ಫೋಟೋ ಶೇರ್ ಮಾಡಿ ದಿ ಬೆಸ್ಟ್ ಎಂದು ಬರೆದಿರುವ ಪ್ರಚಿ ಸಿಂಗ್ ಹಾರ್ಟ್ ಚಿಹ್ನೆ ಬಳಸಿ ತಮ್ಮ ಖುಷಿ ಹೊರಹಾಕಿದ್ದಾರೆ.
ನಟಿ ಪ್ರಚಿ ಸಿಂಗ್ ಹಾಗೂ ಪೃಥ್ವಿ ಶಾ ಪರಸ್ಪರ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಇದೀಗ ಪ್ರಚಿ ಪ್ರಕಟಿಸಿರುವ ಪೋಸ್ಟ್ ನೋಡಿ ಇಬ್ಬರ ನಡುವೆ ಏನೋ ಇದೆ ಎನ್ನುವುದು ಪಕ್ಕಾ ಆಗಿದೆ.