Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲು 250 ರನ್ ಗಳ ಗೆಲುವಿನ ಗುರಿ ಸಿಕ್ಕಿದೆ.
ಮಳೆಯಿಂದಾಗಿ ತಲಾ 40 ಓವರ್ ಗೆ ಪಂದ್ಯ ಕಡಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 40 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ 48, ಹೆನ್ರಿಚ್ ಕ್ಲಾಸನ್ 74, ಡೇವಿಡ್ ಮಿಲ್ಲರ್ 75 ರನ್ ಗಳಿಸಿದರು. ಭಾರತದ ಪರ ಶ್ರಾದ್ಧೂಲ್ ಠಾಕೂರ್ 2, ರವಿ ಬಿಷ್ಣೋಯ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ ಶುಬ್ನಂ ಗಿಲ್ ವಿಕೆಟ್ ಕಳೆದುಕೊಂಡು 3 ಓವರ್ ಗಳಲ್ಲಿ 8 ರನ್ ಗಳಿಸಿದೆ.
-Rajesh Patil