Publish Date: Fri, 03 Nov 2017 (13:35 IST)
Updated Date: Fri, 03 Nov 2017 (13:38 IST)
ಪುಣೆ: ಮಹಾರಾಷ್ಟ್ರ ವಿರುದ್ಧ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಗಳಿಸಿದ್ದು ರಾಜ್ಯ ತಂಡ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಮಹಾರಾಷ್ಟ್ರ ಮೊದಲ ಇನಿಂಗ್ಸ್ ನಲ್ಲಿ ಕೇವಲ 245 ರನ್ ಗಳಿಸಿತ್ತಷ್ಟೇ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 628 ರನ್ ಗಳಿಸಿದ್ದು 383 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಕರ್ನಾಟಕದ ಪರ ತ್ರಿಶತಕ ಸಿಡಿಸಿದ ಮಯಾಂಕ್ ಅಗರ್ವಾಲ್ 494 ಬಾಲ್ ಗಳಲ್ಲಿ ಅಜೇಯವಾಗಿ 304 ರನ್ ಗಳಿಸಿದರು. ಅವರ ಈ ಮ್ಯಾರಥಾನ್ ಇನಿಂಗ್ಸ್ ನಲ್ಲಿ 28 ಬೌಂಡರಿ ಮತ್ತು 4 ಸಿಕ್ಸರ್ ಇತ್ತು. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ಭಾರಿಸಿದ ಕರ್ನಾಟಕದ ಮೂರನೇ ಮತ್ತು ಭಾರತದ 43 ನೇ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾದರು. ಅವರು ತ್ರಿಶತಕ ಗಳಿಸುತ್ತಿದ್ದಂತೇ ಸಹ ಆಟಗಾರರು ಪೆವಿಲಿಯನ್ ನಲ್ಲಿ ಕುಣಿದಾಡಿಬಿಟ್ಟರು. ಇದರ ಬೆನ್ನಲ್ಲೇ ನಾಯಕ ವಿನಯ್ ಕುಮಾರ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ