Publish Date: Sun, 09 Jan 2022 (08:40 IST)
Updated Date: Sun, 09 Jan 2022 (08:49 IST)
ಮುಂಬೈ: ಐಪಿಎಲ್ ನಲ್ಲಿ ಪಂಜಾಬ್ ತಂಡದ ನಾಯಕರಾಗಿದ್ದಾಗ ಕೆಎಲ್ ರಾಹುಲ್ ಆಟಗಾರನಾಗಿ ಮಿಂಚಿದರು. ಆದರೆ ನಾಯಕತ್ವದಲ್ಲಿ ಅವರು ಎಲ್ಲಾ ಚೆನ್ನಾಗಿದೆ ಎನ್ನುವಾಗಲೇ ಎಡವುತ್ತಿದ್ದರು.
ಇದೀಗ ಟೀಂ ಇಂಡಿಯಾ ನಾಯಕರಾಗಿ ಅವರಿಗೆ ಮೊದಲ ಪರೀಕ್ಷೆಯಾಗಿತ್ತು. ಈಗಲೂ ಮೊದಲಾರ್ಧದಲ್ಲಿ ಗೆದ್ದು, ಕೊನೆಯಲ್ಲಿ ಸೋತರು. ಹೀಗಾಗಿ ರಾಹುಲ್ ಗೆ ನಾಯಕತ್ವ ಎನ್ನುವುದು ದುರಾದೃಷ್ಟವೇ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.
ವಿಪರ್ಯಾಸವೆಂದರೆ ಐಪಿಎಲ್ ನಲ್ಲೂ ಅವರು ನಾಯಕರಾಗಿದ್ದಾಗ ಅವರೊಬ್ಬರು ಮಾತ್ರ ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದರು. ಪಂದ್ಯ ಕೈಯಲ್ಲಿಯೇ ಇದೆ ಎನ್ನುವಾಗ ಕೊನೆಯ ಕ್ಷಣದಲ್ಲಿ ಜಾರಿ ಬೀಳುತ್ತಿದ್ದರು. ಇದೀಗ ಟೀಂ ಇಂಡಿಯಾದಲ್ಲಿ ಮೊದಲ ಮೂರು ದಿನ ಪಂದ್ಯ ಟೀಂ ಇಂಡಿಯಾ ಹಿಡಿತದಲ್ಲೇ ಇತ್ತು. ಆದರೆ ಕೊನೆಯ ದಿನ ಮಳೆ, ಜೊತೆಗೆ ಡೀನ್ ಎಲ್ಗರ್ ಬ್ಯಾಟಿಂಗ್ ಭಾರತದ ಪಾಲಿಗೆ ಮಾರಕವಾಗಿದ್ದು ವಿಪರ್ಯಾಸ.