Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಿಆರ್ ಎಸ್ ವಿವಾದ: ಟೀಂ ಇಂಡಿಯಾಕ್ಕೆ ಐಸಿಸಿ ಖಡಕ್ ಎಚ್ಚರಿಕೆ

ಡಿಆರ್ ಎಸ್ ವಿವಾದ: ಟೀಂ ಇಂಡಿಯಾಕ್ಕೆ ಐಸಿಸಿ ಖಡಕ್ ಎಚ್ಚರಿಕೆ
ದುಬೈ , ಭಾನುವಾರ, 16 ಜನವರಿ 2022 (09:46 IST)
ದುಬೈ: ದ.ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ ವಿಚಾರದಲ್ಲಿ ವಿವಾದಾತ್ಮಕವಾಗಿ ಡಿಆರ್ ಎಸ್ ತೀರ್ಪು ನೀಡಿದ್ದಕ್ಕೆ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದ ಟೀಂ ಇಂಡಿಯಾಗೆ ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ.

ಥರ್ಡ್ ಅಂಪಾಯರ್ ನಾಟೌಟ್ ತೀರ್ಪು ನೀಡಲು ಬಾಲ್ ಟ್ರ್ಯಾಕಿಂಗ್ ಸಿಸ್ಟಂ ಬಗ್ಗೆ ಕೊಹ್ಲಿ, ಅಶ್ವಿನ್, ಕೆಎಲ್ ರಾಹುಲ್ ಸೇರಿದಂತೆ ಕೆಲವರು ಮೈದಾನದಲ್ಲೇ ಸ್ಟಂಪ್ ಮೈಕ್ರೋಫೋನ್ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೊಹ್ಲಿ ಮತ್ತು ಬಳಗದ ಈ ವರ್ತನೆ ಭಾರೀ ಟೀಕೆಗೊಳಗಾಗಿತ್ತು.

ಇದನ್ನು ಗಮನಿಸಿರುವ ಐಸಿಸಿ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಮತ್ತೆ ಇಂತಹ ತಪ್ಪು ಪುನರಾವರ್ತನೆಯಾದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕತ್ವ ಬಿಡುವ ಬಗ್ಗೆ ಕೊಹ್ಲಿ ಮೊದಲು ಹೇಳಿದ್ದು ಈ ವ್ಯಕ್ತಿಗೆ!