Publish Date: Tue, 20 Sep 2022 (09:30 IST)
Updated Date: Tue, 20 Sep 2022 (09:38 IST)
ಮೊಹಾಲಿ: ಬೆನ್ನು ನೋವಿನಿಂದಾಗಿ ಏಷ್ಯಾ ಕಪ್ ನಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಈಗ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಬುಮ್ರಾ ಮೈದಾನಕ್ಕೆ ಮರಳುತ್ತಿರುವ ಖುಷಿಯಲ್ಲಿದ್ದಾರೆ. ಮೊಹಾಲಿಯಲ್ಲಿ ತಂಡದ ಜೊತೆಗೆ ಅಭ್ಯಾಸ ನಡೆಸಿರುವ ಫೋಟೋ ಪ್ರಕಟಿಸಿರುವ ಬುಮ್ರಾ ತಾನು ಚೇತರಿಸಿಕೊಂಡು ಮತ್ತೆ ಆಡಲು ಸಿದ್ಧನಾಗಿರುವುದಾಗಿ ಹೇಳಿದ್ದಾರೆ.
ಬುಮ್ರಾ ಕಮ್ ಬ್ಯಾಕ್ ಭಾರತ ತಂಡಕ್ಕೆ ಬಿಗ್ ಪ್ಲಸ್ ಪಾಯಿಂಟ್ ಆಗಲಿದೆ. ವಿಶ್ವಕಪ್ ದೃಷ್ಟಿಯಿಂದ ಬುಮ್ರಾರನ್ನು ಎಲ್ಲಾ ಪಂದ್ಯಗಳಲ್ಲಿ ಆಡಿಸುವ ಸಾಧ‍್ಯತೆಯಿಲ್ಲ. ಹಾಗಿದ್ದರೂ ಅವರು ಫಿಟ್ ಆಗಿರುವುದು ತಂಡಕ್ಕೆ ಆನೆಬಲ ಬಂದಂತಾಗಿದೆ.