Publish Date: Sat, 13 Oct 2018 (11:52 IST)
Updated Date: Sat, 13 Oct 2018 (11:54 IST)
ಹೈದರಾಬಾದ್: ಪದೇ ಪದೇ ವಿಫಲರಾಗುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ ಭವಿಷ್ಯ ಇದೀಗ ಮಸುಕಾಗುತ್ತಿದೆ.
ಕರ್ನಾಟಕ ಮೂಲದ ಬ್ಯಾಟ್ಸ್ ಮನ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕೇವಲ 4 ರನ್ ಗಳಿಗೆ ಔಟಾಗುವುದರೊಂದಿಗೆ ಅವರ ಆರಂಭಿಕ ಸ್ಥಾನಕ್ಕೆ ಕುತ್ತುಬರುವ ನಿರೀಕ್ಷೆಯಿದೆ.
ವಿಂಡೀಸ್ ನ ದುರ್ಬಲ ಬೌಲಿಂಗ್ ದಾಳಿಯನ್ನು ಪೃಥ್ವಿ ಶಾರಂತಹ ಯುವ ಆಟಗಾರರೂ ಧೂಳೀಪಟ ಮಾಡುತ್ತಿರುವಾಗ ಕೆಎಲ್ ರಾಹುಲ್ ಮಾತ್ರ ತಡಕಾಡುತ್ತಿರುವುದು ನೋಡಿದರೆ ಅಚ್ಚರಿಯಾಗುತ್ತದೆ. ಇಂದು ದ್ವಿತೀಯ ದಿನವಾಗಿದ್ದು ಭಾರತ ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ. ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಗಮನ ಸೆಳೆದಿದ್ದ ಪೃಥ್ವಿ ಶಾ ಇಂದೂ ಕೂಡಾ ಅದೇ ಫಾರ್ಮ್ ಮುಂದುವರಿಸಿದ್ದು 52 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.