Publish Date: Sat, 13 Oct 2018 (08:53 IST)
Updated Date: Sat, 13 Oct 2018 (08:57 IST)
ಹೈದರಾಬಾದ್: ಪದಾರ್ಪಣೆಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲೇ ಕ್ರಿಕೆಟಿಗ ಶ್ರಾದ್ಧೂಲ್ ಠಾಕೂರ್ ಗೆ ದುರಾದೃಷ್ಟ ಹಿಂದೆ ಬಿದ್ದಿದೆ.
ಮೊದಲ ಟೆಸ್ಟ್ ನಲ್ಲಿ ಆಡುವ ಉತ್ಸಾಹದಲ್ಲಿದ್ದ ಯುವ ವೇಗಿಗೆ ಕೇವಲ 10 ಎಸೆತ ಎಸೆಯುವಷ್ಟರಲ್ಲಿ ಗಾಯ ವಕ್ಕರಿಸಿಕೊಂಡಿದೆ. ಇದರಿಂದಾಗಿ ಮೈದಾನದಿಂದ ಹೊರಗುಳಿಯಬೇಕಾಯಿತು.
ಬೌಲಿಂಗ್ ನಡುವೆ ತೀವ್ರ ತೊಡೆ ನೋವಿಗೆ ತುತ್ತಾದ ಶ್ರಾದ್ಧೂಲ್ ಫಿಸಿಯೋ ನೆರವಿನಿಂದ ಪೆವಿಲಿಯನ್ ಗೆ ಮರಳಿದರು. ಬಳಿಕ ರವಿಚಂದ್ರನ್ ಅಶ್ವಿನ್ ಶ್ರಾದ್ಧೂಲ್ ಓವರ್ ಪೂರ್ತಿಗೊಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.