Publish Date: Tue, 20 Sep 2022 (08:50 IST)
Updated Date: Tue, 20 Sep 2022 (09:02 IST)
ಮೊಹಾಲಿ: ಬಹಳ ದಿನಗಳ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಮೇಲೆ ಕೆಎಲ್ ರಾಹುಲ್ ಬ್ಯಾಟಿಂಗ್ ಮೊದಲಿನಂತೆ ಸದ್ದು ಮಾಡಿಲ್ಲ.
ಇದರಿಂದಾಗಿ ಅವರನ್ನು ತಂಡದಿಂದ ಕಿತ್ತು ಹಾಕಬೇಕು ಎಂಬ ಒತ್ತಾಯಗಳೂ ಕೇಳಿಬರುತ್ತಿವೆ. ಇದೀಗ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ನಡೆಯಲಿದ್ದು, ಕೆಎಲ್ ರಾಹುಲ್ ಪಾಲಿಗೆ ಇದು ಫಾರ್ಮ್ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯವಾಗಲಿದೆ.
ಟಿ20 ವಿಶ್ವಕಪ್ ಗೆ ಭಾರತದ ಪರ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. ಹೀಗಾಗಿ ಟೀಂ ಇಂಡಿಯಾ ಬಲಿಷ್ಠವಾಗಬೇಕಾದರೆ ಆರಂಭಿಕ ರಾಹುಲ್ ಮತ್ತೆ ಫಾರ್ಮ್ ಕಂಡುಕೊಳ್ಳಬೇಕಾದ ಅಗತ್ಯವಿದೆ.