ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಒಂದು ರೀತಿಯಲ್ಲಿ ಕರ್ನಾಟಕಮಯವಾಗಿದೆ. ತಂಡದ ಚುಕ್ಕಾಣಿ ಕೆಎಲ್ ರಾಹುಲ್ ಹಿಡಿದರೆ ಕೋಚ್ ಆಗಿ ಅನಿಲ್ ಕುಂಬ್ಳೆ ಸಾರಥ್ಯ ವಹಿಸಲಿದ್ದಾರೆ.
ರವಿಚಂದ್ರನ್ ಅಶ್ವಿನ್ ಡೆಲ್ಲಿ ತಂಡದ ಪಾಲಾದ ಮೇಲೆ ರಾಹುಲ್ ಈ ಆವೃತ್ತಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಬಳಿಕ ಐಪಿಎಲ್ ತಂಡವೊಂದಕ್ಕೆ ಪೂರ್ಣ ಪ್ರಮಾಣದ ನಾಯಕರಾದ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.
ವಿಶೇಷವೆಂದರೆ ಕನ್ನಡಿಗ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಪಂಜಾಬ್ ತಂಡದ ಕೋಚ್ ಆಗಿದ್ದು ಮತ್ತೆ ಕೆಎಲ್ ರಾಹುಲ್ ಗೆ ಅನಿಲ್ ಕುಂಬ್ಳೆ ಕೋಚಿಂಗ್ ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಂತಾಗಿದೆ. ಇನ್ನು, ಬ್ಯಾಟ್ಸ್ ಮನ್ ಗಳ ಪೈಕಿ ಮಯಾಂಕ್ ಅಗರ್ವಾಲ್ ಕೂಡಾ ಪಂಜಾಬ್ ಪರ ಆಡುತ್ತಿದ್ದು, ಒಟ್ಟಾರೆ ಇಲ್ಲಿ ಕನ್ನಡಿಗರದ್ದೇ ಆಧಿಪತ್ಯ ಎನ್ನುವಂತಾಗಿದೆ.