Publish Date: Thu, 19 Dec 2019 (16:43 IST)
Updated Date: Thu, 19 Dec 2019 (16:44 IST)
ಕೋಲ್ಕೊತ್ತಾ: ಈ ವರ್ಷದ ಐಪಿಎಲ್ ಆವೃತ್ತಿಗೆ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ಕೋಲ್ಕೊತ್ತಾದಲ್ಲಿ ನಡೆಯುತ್ತಿದ್ದು ಎರಡನೇ ಹಂತದಲ್ಲಿ ಕನ್ನಡಿಗ ಸ್ಟುವರ್ಟ್ ಬಿನ್ನಿ ಮತ್ತು ಯೂಸಫ್ ಪಠಾಣ್ ಹರಾಜಾಗದೇ ಉಳಿದಿದ್ದಾರೆ.
ಅಂತಿಮ ಹಂತದಲ್ಲಿ ಈ ಆಟಗಾರರನ್ನು ಖರೀದಿ ಮಾಡುವವರು ಇದ್ದಾರೆಯೇ ಎಂದು ಕಾದು ನೋಡಬೇಕು. ಎರಡನೇ ಹಂತದಲ್ಲಿ ಆರ್ ಸಿಬಿ 10 ಕೋಟಿ ರೂ.ಗೆ ಕ್ರಿಸ್ ಮಾರಿಸ್ ರನ್ನು ಖರೀದಿ ಮಾಡಿದೆ. ಆರ್ ಸಿಬಿ ಬಳಿ ಇನ್ನು13.50 ಕೋಟಿ ರೂ. ಬಾಕಿ ಉಳಿದಿದೆ.
31.95 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಅತೀ ಹೆಚ್ಚು ಬಾಕಿ ಮೊತ್ತ ಹೊಂದಿದ್ದು, ಇನ್ನಷ್ಟು ಆಟಗಾರರನ್ನು ಖರೀದಿ ಮಾಡುವ ನಿರೀಕ್ಷೆಯಲ್ಲಿದೆ.