ಹೈದರಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ತಮ್ಮ ತಂಡದ ಆಟಗಾರರಿಗೆ ಎದುರಾಳಿ ಆಟಗಾರನನ್ನು ಔಟ್ ಮಾಡು ಎಂದು ಸನ್ನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್ ಪಂದ್ಯ ನಡೆಯುವಾಗಲೆಲ್ಲಾ ಕಾವ್ಯಾ ಮಾರನ್ ಮೈದಾನದಲ್ಲಿ ತಪ್ಪದೇ ಹಾಜರಿರುತ್ತಾರೆ. ಅವರ ರಿಯಾಕ್ಷನ್ ನೋಡಲೆಂದೇ ಒಂದು ಕ್ಯಾಮರಾ ಇಡಬೇಕು. ಆ ಪರಿ ಎಕ್ಸ್ ಪ್ರೆಷನ್ ಕೊಡುತ್ತಾರೆ.
ಪಂದ್ಯದ 13 ನೇ ಓವರ್ ನ ಮೊದಲ ಎಸೆತದಲ್ಲಿ ವಿಪ್ರಾಜ್ ನಿಗಮ್ ಎರಡು ರನ್ ಗಾಗಿ ಓಡುತ್ತಿದ್ದರು. ಇನ್ನೊಂದು ತುದಿಯಲ್ಲಿದ್ದ ಸ್ಟಬ್ಸ್ ರನ್ ಗಾಗಿ ಓಡಿರಲಿಲ್ಲ. ಆದರೆ ವಿಪ್ರಾಜ್ ಮುಂದೆ ಬಂದಿದ್ದರು. ಇದನ್ನು ಗಮನಿಸಿದ ಕಾವ್ಯಾ ಮಾರನ್ ಔಟ್ ಮಾಡು ಎಂದು ತಮ್ಮ ಆಟಗಾರರಿಗೆ ಸೂಚನೆ ನೀಡಿದ್ದಾರೆ.
ಕೊನೆಗೆ ವಿಪ್ರಾಜ್ ರನ್ನು ಅನಿಕೇತ್ ವರ್ಮ ಮತ್ತು ಜೀಶಾನ್ ಅನ್ಸಾರಿ ರನೌಟ್ ಮಾಡುವಲ್ಲಿ ಯಶಸ್ವಿಯಾದಾಗ ಕಾವ್ಯಾ ಮೊಗದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೇ ರದ್ದಾಯಿತು.