Webdunia - Bharat's app for daily news and videos

Install App

ಐಪಿಎಲ್ 2024: ಹಳೇ ತಂಡದ ವಿರುದ್ಧವೇ ಮುಂಬೈ ಇಂಡಿಯನ್ಸ್ ನಾಯಕರಾಗಿ ಆಡಲಿರುವ ಹಾರ್ದಿಕ್ ಪಾಂಡ್ಯ

Krishnaveni K
ಭಾನುವಾರ, 24 ಮಾರ್ಚ್ 2024 (13:03 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಇಂದು ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿರುವ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ನಡೆಯಲಿದೆ.

ಗುಜರಾತ್ ಟೈಟನ್ಸ್ ಕಳೆದ ಎರಡು ಆವೃತ್ತಿಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಣಕ್ಕಿಳಿದು ಎರಡೂ ಬಾರಿಯೂ ಫೈನಲ್ ಪ್ರವೇಶಿಸಿತ್ತು. ಆದರೆ ಈಗ ಹಾರ್ದಿಕ್ ಗುಜರಾತ್ ಬಿಟ್ಟು ಮುಂಬೈ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತನ್ನ ಯಶಸ್ವೀ ನಾಯಕ ರೋಹಿತ್ ಶರ್ಮಾ ಕೈ ಬಿಟ್ಟು ಈಗ ಅವರನ್ನು ಕೇವಲ ಆಟಗಾರನಾಗಿ ಬಳಸಿಕೊಳ್ಳುತ್ತಿದೆ. ತಂಡದೊಳಗೆ ಈ ಬದಲಾವಣೆಯಿಂದಾಗಿ ಅಸಮಾಧಾನಗಳ ವದಂತಿಗಳ ಬೆನ್ನಲ್ಲೇ ಈ ಎರಡು ಪ್ರಮುಖ ತಂಡಗಳು ಮುಖಾಮುಖಿಯಾಗುತ್ತಿದೆ.

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ತಿಲ‍ಕ್ ವರ್ಮ, ಇಶಾನ್ ಕಿಶನ್, ಟಿಮ್ ಡೇವಿಡ್ ರಂತಹ ಘಟಾನುಘಟಿಗಳನ್ನು ಹೊಂದಿದ ಮುಂಬೈ ಇಂಡಿಯನ್ಸ್ ಮೇಲ್ನೋಟಕ್ಕೆ ಫೇವರಿಟ್ ಎನಿಸುತ್ತದೆ. ಈ ಬಾರಿ ಹೊಸ ನಾಯಕತ್ವದಲ್ಲಿ ಮುಂಬೈ ಪ್ರದರ್ಶನ ಹೇಗಿರಲಿದೆ ಎಂದು ನೋಡಬೇಕಿದೆ.

ಇತ್ತ ಗುಜರಾತ್ ತಂಡವನ್ನು ಇದೇ ಮೊದಲ ಬಾರಿಗೆ ನಾಯಕರಾಗಿರುವ ಶುಬ್ಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಕಳೆದ ಎರಡೂ ಆವೃತ್ತಿಗಳಲ್ಲಿ ಗಿಲ್ ಏಕಾಂಗಿಯಾಗಿ ಗುಜರಾತ್ ಬ್ಯಾಟಿಂಗ್ ಹೊಣೆ ಹೆಗಲಿಗೇರಿಸಿದ್ದರು. ಆದರೆ ಈ ಬಾರಿ ನಾಯಕತ್ವದ ಹೊಣೆಯೂ ಇರುವುದರಿಂದ ಅವರ ಪ್ರದರ್ಶನ ಹೇಗಿರುತ್ತದೆ ಎಂದು ನೋಡಬೇಕಿದೆ. ಅಲ್ಲದೆ, ಅನುಭವಿ ವೇಗಿ ಮೊಹಮ್ಮದ್ ಶಮಿ ಅನುಪಸ್ಥಿತಿಯೂ ತಂಡಕ್ಕೆ ಕಾಡಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ನೋಟ್ ಬುಕ್ ಸೆಲೆಬ್ರೇಷನ್ ತಂದ ಆಪತ್ತು, ದಿಗ್ವೇಶ್ ರಾಠಿ ಅಮಾನತು

IPL 2025 video: ಜುಟ್ಟು ಹಿಡಿದು ಎಳೀತೀನಿ ನಿಂದು.. ದಿಗ್ವೇಶ್ ಮೇಲೆ ಅಭಿಷೇಕ್ ಶರ್ಮಾ ರೋಷ

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಮುಂದಿನ ಸುದ್ದಿ
Show comments