Publish Date: Sun, 23 Apr 2023 (19:31 IST)
Updated Date: Sun, 23 Apr 2023 (19:33 IST)
ಬೆಂಗಳೂರು: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ತಂಡವನ್ನು 7 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಈ ಪಂದ್ಯವನ್ನೂ ಆರ್ ಸಿಬಿಯನ್ನು ಕೊಹ್ಲಿ ಮುನ್ನಡೆಸಿದರು. ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದ ಫಾ ಡು ಪ್ಲೆಸಿಸ್ 62 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್ ವೆಲ್ 77 ರನ್ ಗಳಿಸಿದರು.
ಇದಕ್ಕೆ ಉತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಲಷ್ಟೇ ಶಕ್ತವಾಯಿತು. ಯಶಸ್ವಿ ಜೈಸ್ವಾಲ್ 47, ದೇವದತ್ತ ಪಡಿಕ್ಕಲ್ 52 ರನ್ ಗಳಿಸಿದರು. ಯುವ ಬ್ಯಾಟಿಗ ಧ್ರುವ ಜ್ಯುರೆಲ್ ಗೆಲುವಿಗಾಗಿ ಶತಪ್ರಯತ್ನ ನಡೆಸಿ 16 ಎಸೆತಗಳಿಂದ 34 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಎರಡು ಬೌಂಡರಿಗಳ ಮೂಲಕ ಆತಂಕ ಮೂಡಿಸಿದರು. ಆದರೆ ಅವರ ವಿಕೆಟ್ ಹರ್ಷಲ್ ಪಟೇಲ್ ಕೀಳುತ್ತಿದ್ದಂತೇ ಆರ್ ಸಿಬಿ ಗೆಲುವು ಪಕ್ಕಾ ಆಯ್ತು.