Publish Date: Fri, 31 Mar 2023 (08:10 IST)
Updated Date: Fri, 31 Mar 2023 (08:19 IST)
ಅಹಮ್ಮದಾಬಾದ್: ಐಪಿಎಲ್ 2023 ಕ್ಕೆ ಇಂದು ಚಾಲನೆ ಸಿಗಲಿದೆ. ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಅದ್ಧೂರಿ ಆರಂಭೋತ್ಸವ ನಡೆಯುತ್ತಿದೆ.
ಈ ಬಾರಿ ಮತ್ತೆ ಐಪಿಎಲ್ ಗತವೈಭವ ಮರಳಲಿದೆ ಎನ್ನಬಹುದು. ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಆರಂಭೋತ್ಸವ ನಡೆಯಲಿದೆ.
ಟಾಲಿವುಡ್ ನಟಿ ತಮನ್ನಾ, ರಶ್ಮಿಕಾ ಮಂದಣ್ಣ ನೃತ್ಯ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳು ಆರಂಭೋತ್ಸವದ ಕಳೆ ಹೆಚ್ಚಿಸಲಿದೆ. ಮೊದಲ ಪಂದ್ಯ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದ್ದು, ಇದಕ್ಕೆ ಮೊದಲು ಆರಂಭೋತ್ಸವ ನಡೆಯುವುದು.