Publish Date: Thu, 30 Mar 2023 (09:30 IST)
Updated Date: Thu, 30 Mar 2023 (09:47 IST)
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.
ಆದರೆ ಯುವ ಆಲ್ ರೌಂಡರ್ ಅರ್ಜುನ್ ಗೆ ಇದುವರೆಗೆ ಐಪಿಎಲ್ ಪಂದ್ಯದಲ್ಲಿ ಆಡುವ ಅವಕಾಶ ದೊರೆತಿಲ್ಲ. ಕಳೆದ ಐಪಿಎಲ್ ನಲ್ಲಿ ಅವರಿಗೆ ಅವಕಾಶ ಸಿಗಬಹುದು ಎಂದು ಕಾದಿದ್ದ ಫ್ಯಾನ್ಸ್ ಗೆ ನಿರಾಸೆಯಾಗಿತ್ತು.
ಆದರೆ ಈ ಬಾರಿ ಅರ್ಜುನ್ ಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡಾ ಸುಳಿವು ನೀಡಿದ್ದಾರೆ. ಮಾಧ‍್ಯಮಗಳ ಪ್ರಶ್ನೆಗೆ ಉತ್ತರಿಸಿರುವ ರೋಹಿತ್ ಈ ಬಾರಿ ಅವಕಾಶ ನೀಡಬಹುದು ಎಂದುಕೊಳ್ಳೋಣ ಎಂದು ಉತ್ತರಿಸಿದ್ದಾರೆ.