Publish Date: Mon, 24 Apr 2023 (06:20 IST)
Updated Date: Mon, 24 Apr 2023 (06:47 IST)
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಾಬಲ್ಯ ಮುಂದುವರಿದಿದೆ. ಕೆಕೆಆರ್ ತಂಡವನ್ನು 49 ರನ್ ಗಳಿಂದ ಮಣಿಸಿದ ಸಿಎಸ್ ಕೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 35, ಡೆವನ್ ಕಾನ್ವೇ 56, ಅಜಿಂಕ್ಯಾ ರೆಹಾನೆ ಅಜೇಯ 71, ಶಿವಂ ದುಬೆ 50 ರನ್ ಗಳಿಸಿದರು. ಅಗ್ರ ಕ್ರಮಾಂಕದ ಪ್ರತಿಯೊಬ್ಬ ಬ್ಯಾಟಿಗನೂ ಭರ್ಜರಿ ಬ್ಯಾಟಿಂಗ್ ಮಾಡಿದ್ದರಿಂದ ಚೆನ್ನೈ ಬೃಹತ್ ಮೊತ್ತವನ್ನೇ ಪೇರಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡರೂ ಕೊನೆಯ ಹಂತದಲ್ಲಿ ಜೇಸನ್ ರಾಯ್ ಅರ್ಧಶತಕ (61), ರಿಂಕು ಸಿಂಗ್ ಅಜೇಯ 53 ರನ್ ಸಿಡಿಸಿ ಹೋರಾಟ ನಡೆಸಿದರು. ಆದರೆ ಇವರಿಗೆ ತಕ್ಕ ಸಾಥ್ ಸಿಗದೇ ಕೆಕೆಆರ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು.