ಲಕ್ನೋ: ಐಪಿಎಲ್ 2023 ರ ಇಂದಿನ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸಿಎಸ್ ಕೆ ನಡುವಿನ ಪಂದ್ಯ ಫಲಿತಾಂಶ ಕಾಣದೇ ರದ್ದಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಬ್ಯಾಟಿಂಗ್ ಹಳಿ ತಪ್ಪಿದಂತಾಗಿತ್ತು. 14 ಓವರ್ ಕಳೆದಾಗಲೂ 5 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದ ಲಕ್ನೋ ಇಂದು 100 ರ ಗಡಿ ದಾಟುವುದೂ ಅನುಮಾನವಿತ್ತು. ಆದರೆ ಆಯುಷ್ ಬದಾನಿ 33 ಎಸೆತಗಳಲ್ಲಿ ಅಜೇಯ 59 ರನ್ ಸಿಡಿಸಿ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಿದರು. ಆದರೆ 19.2 ಓವರ್ ಗೆ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದ್ದಾಗ ಮಳೆ ಶುರುವಾಗಿತ್ತು.
ಬಳಿಕ ಒಂದೇ ಒಂದು ಎಸೆತದ ಆಟ ನಡೆಯಲಿಲ್ಲ. ಕೊನೆಗೆ ಅಂಪಾಯರ್ ಗಳು ಪಂದ್ಯ ರದ್ದುಗೊಳಿಸಿದರು. ಇದರಿಂದಾಗಿ ಬೆಂಗಳೂರಿನ ಹೊರತಾದ ಸ್ಥಳದಲ್ಲಿ ಇದು ಎರಡನೇ ಬಾರಿ ಫಲಿತಾಂಶವಿಲ್ಲದೇ ಪಂದ್ಯ ಮುಕ್ತಾಯಗೊಂಡ ಘಟನೆಗೆ ಈ ಪಂದ್ಯ ಸಾಕ್ಷಿಯಾಯಿತು.