Select Your Language

Notifications

webdunia
webdunia
webdunia
webdunia

ಐಪಿಎಲ್ ಮತ್ತೆ ವಿದೇಶಕ್ಕೆ ಶಿಫ್ಟ್?

ಐಪಿಎಲ್
ಮುಂಬೈ: ದೇಶದಲ್ಲಿ ಈಗ ಕೊರೋನಾ ಮೂರನೇ ಅಲೆ ಅಬ್ಬರ ಶುರುವಾಗಿದ್ದು, ಏಪ್ರಿಲ್ ನಲ್ಲಿ ನಡೆಯಬೇಕಿರುವ ಐಪಿಎಲ್ ಕೂಟದ ಮೇಲೆ ಕರಿಛಾಯೆ ಮೂಡಿದೆ.

ಕೊರೋನಾ ಇದೇ ರೀತಿ ಮುಂದುವರಿದು ಏಪ್ರಿಲ್ ನಲ್ಲಿಯೂ ಇದೇ ಸ್ಥಿತಿಯಾದರೆ ಐಪಿಎಲ್ ಭಾರತದಲ್ಲಿ ನಡೆಸಲು ಸಾಧ‍್ಯವಾಗದು. ಹೀಗಾಗಿ ಬಿಸಿಸಿಐ ಸದ್ಯದ ಮಟ್ಟಿಗೆ ಭಾರತದಲ್ಲೇ ನಡೆಸಲು ತಯಾರಿ ಆರಂಭಿಸಿದರೂ, ವಿದೇಶೀ ತಾಣದ ಬಗ್ಗೆಯೂ ಆಯ್ಕೆ ಮುಕ್ತವಾಗಿರಿಸಿದೆ.

ಕಳೆದ ಬಾರಿ ಐಪಿಎಲ್ ಮೊದಲ ಹಂತ ಭಾರತದಲ್ಲಿ ಆರಂಭವಾಗಿ ಬಳಿಕ ಕೊರೋನಾ ಹೆಚ್ಚಾದ ಕಾರಣ ಯುಎಇನಲ್ಲಿ ಎರಡನೇ ಹಂತ ನಡೆದಿತ್ತು. ಈ ಬಾರಿ ಕೊರೋನಾ ಯಾವ ಪರಿಸ್ಥಿತಿಗೆ ಬರುತ್ತದೆ ಎಂದು ಬಿಸಿಸಿಐ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟೆಸ್ಟ್: ಟೆಸ್ಟ್ ಸ್ಪೆಷಲಿಸ್ಟ್ ಪೂಜಾರಗಿಂತಲೂ ನಿಧಾನಿಯಾದ ಕೊಹ್ಲಿ