Publish Date: Wednesday, 04 January 2023 (10:30 IST)
Updated Date: Wednesday, 04 January 2023 (10:32 IST)
ಮುಂಬೈ: ಗಾಯದಿಂದಾಗಿ ಬಹಳ ದಿನಗಳಿಂದ ಸಕ್ರಿಯ ಕ್ರಿಕೆಟ್ ನಿಂದ ದೂರವಿರುವ ಜಸ್ಪ್ರೀತ್ ಬುಮ್ರಾ ಈಗ ತಂಡಕ್ಕೆ ವಾಪಸ್ ಆಗುತ್ತಿದ್ದಾರೆ.
ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ತಂಡದಿಂದ ಹೊರಬಿದ್ದಿದ್ದರು. ಬಳಿಕ ಟಿ20 ವಿಶ್ವಕಪ್ ನಲ್ಲೂ ಆಡಿರಲಿಲ್ಲ.
ಇದೀಗ ಚೇತರಿಸಿಕೊಂಡಿರುವ ಬುಮ್ರಾರನ್ನು ಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಕದಿನ ಸರಣಿ ಜನವರಿ 10 ರಿಂದ ಆರಂಭವಾಗಲಿದೆ. ಸೆಪ್ಟೆಂಬರ್ ನಲ್ಲಿ ಬುಮ್ರಾ ಕೊನೆಯ ಪಂದ್ಯವಾಡಿದ್ದರು.