Publish Date: Wed, 11 Aug 2021 (09:53 IST)
Updated Date: Wed, 11 Aug 2021 (09:54 IST)
ದುಬೈ: ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಯಾಕಿಲ್ಲ? ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆದರೆ ಇದು ಸದ್ಯದಲ್ಲೇ ನನಸಾಗುವ ಸಾಧ‍್ಯತೆ ಇಲ್ಲದಿಲ್ಲ.
2028 ರ ಒಲಿಂಪಿಕ್ಸ್ ಗೆ ಕ್ರಿಕೆಟ್ ನ್ನೂ ಸೇರ್ಪಡೆಗೊಳಿಸುವ ಬಗ್ಗೆ ಐಸಿಸಿ ಪ್ರಯತ್ನ ನಡೆಸಿದೆ. ಒಂದು ವೇಳೆ ಇದು ಯಶಸ್ವಿಯಾದರೆ 128 ವರ್ಷಗಳ ಸುದೀರ್ಘ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಲಿದೆ.
ಒಂದು ವೇಳೆ ಕ್ರಿಕೆಟ್ ಒಲಿಂಪಿಕ್ಸ್ ಗೆ ಸೇರ್ಪಡೆಯಾದರೆ ಅದರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿದೆ. ಇದು ಕ್ರೀಡೆಯ ಬೆಳವಣಿಗೆಗೂ ಒಳ್ಳೆಯದು ಎಂಬ ಅಭಿಪ್ರಾಯ ಐಸಿಸಿಯದ್ದು.