Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೂ ರಾಜೀನಾಮೆ ನೀಡಿರುವ ವಿರಾಟ್ ಕೊಹ್ಲಿ ತಮ್ಮ ಪ್ರಕಟಣೆಯಲ್ಲಿ ಧೋನಿ ಮತ್ತು ರವಿಶಾಸ್ತ್ರಿಯನ್ನು ನೆನೆಸಿಕೊಂಡಿದ್ದಾರೆ.
ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವ ಬಗ್ಗೆ ಸುದೀರ್ಘ ಪ್ರಕಟಣೆ ನೀಡಿರುವ ಕೊಹ್ಲಿ, ತಮ್ಮನ್ನು ಸದಾ ಬೆಂಬಲಿಸುತ್ತಿದ್ದ ಕ್ಯಾಪ್ಟನ್ ಧೋನಿ ಮತ್ತು ತಮ್ಮ ನಾಯಕತ್ವ ಪಯಣದಲ್ಲಿ ಯಶಸ್ಸಿಗೆ ಜೊತೆಯಾಗಿ ನಿಂತ ಮಾಜಿ ಕೋಚ್ ಗೆ ಧನ್ಯವಾದ ಸಲ್ಲಿಸಿದ್ದಾರೆ.
ನನ್ನ ಇದುವರೆಗಿನ ನಾಯಕತ್ವದ ಪ್ರಯಾಣವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ನನ್ನ ಏಳು ವರ್ಷದ ನಾಯಕತ್ವದ ಪಯಣ ಈ ಮೂಲಕ ಕೊನೆಗೊಂಡಿದೆ ಎಂದು ಕೊಹ್ಲಿ ಪ್ರಕಟಣೆಯಲ್ಲಿ ಹೇಳಿದ್ದಾರೆ.