Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿರಾಟ್ ಕೊಹ್ಲಿ ಬಿಸಿಸಿಐಯನ್ನೇ ಆಳುವಷ್ಟು ಪವರ್ ಫುಲ್?!

ವಿರಾಟ್ ಕೊಹ್ಲಿ ಬಿಸಿಸಿಐಯನ್ನೇ ಆಳುವಷ್ಟು ಪವರ್ ಫುಲ್?!
ಮುಂಬೈ , ಮಂಗಳವಾರ, 30 ಜುಲೈ 2019 (09:20 IST)
ಮುಂಬೈ: ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲೇ ಸೋತರೂ ಇನ್ನೂ ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿಯನ್ನೇ ಮುಂದುವರಿಸಿರುವುದನ್ನು ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.


ವಿರಾಟ್ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ಸರಣಿಗೂ ನಾಯಕರಾಗಿ ಮುಂದುವರಿಸಿರುವುದನ್ನು ಪ್ರಶ್ನಿಸಿರುವ ಗವಾಸ್ಕರ್ ಟೀಂ ಇಂಡಿಯಾದಲ್ಲಿ ಕೊಹ್ಲಿಗೆ ಅಷ್ಟೊಂದು ಪವರ್ ಫುಲ್ ಸ್ಥಾನ ಯಾಕೆ ಎಂದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.

ಆಂಗ್ಲ ಮಾಧ್ಯಮವೊಂದರ ಅಂಕಣದಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಗವಾಸ್ಕರ್ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ. ವಿಂಡೀಸ್ ಸರಣಿಗೂ ಕೊಹ್ಲಿಯನ್ನು ಆಯ್ಕೆ ಮಾಡುವ ಮೂಲಕ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಎಷ್ಟು ದಿನ ಬಯಸುತ್ತಾರೋ ಅಷ್ಟು ದಿನ ನಾಯಕರಾಗಿ ಮುಂದುವರಿಯಲು ಅವಕಾಶ ನೀಡಿದಂತಾಗಿದೆ ಎಂದು ಕಿಡಿ ಕಾರಿದ್ದಾರೆ.

ಕೊಹ್ಲಿಯ ನಾಯಕತ್ವ ವಿಶ್ವಕಪ್ ವರೆಗೆ ಎಂದು ಇತ್ತು. ಆದರೆ ವಿಶ್ವಕಪ್ ನಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರವೂ ಅವರನ್ನೇ ನಾಯಕರಾಗಿ ಮುಂದುವರಿಸಿರುವುದನ್ನು ನೋಡಿದರೆ ಆಯ್ಕೆ ಸಮಿತಿ ಸಂಪೂರ್ಣ ಸ್ವಾತಂತ್ರ್ಯವನ್ನು ಅವರಿಗೇ ನೀಡಿದಂತೆ ಕಾಣುತ್ತಿದೆ ಎಂದು ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೇ ಗಳಿಗೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ ವಿರಾಟ್ ಕೊಹ್ಲಿ