Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಾರ್ದಿಕ್ ಪಾಂಡ್ಯಗೆ ಒಂದು ಹೊಗಳಿಕೆಯೂ ಇಲ್ವಾ: ಪತ್ನಿ ನತಾಶಗೆ ನೆಟ್ಟಿಗರ ತರಾಟೆ

Hardik Pandya

Krishnaveni K

ಮುಂಬೈ , ಮಂಗಳವಾರ, 2 ಜುಲೈ 2024 (11:21 IST)
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಗೆದ್ದ ಬಳಿಕ ಬಹುತೇಕ ಕ್ರಿಕೆಟಿಗರ ಪತ್ನಿಯರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಪತಿ ಹಾಗೂ ಭಾರತ ತಂಡವನ್ನು ಅಭಿನಂದಿಸಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಮಾತ್ರ ಸೈಲೆಂಟ್ ಆಗಿದ್ದಾರೆ.

ಈ ಟಿ20 ವಿಶ್ವಕಪ್ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಅಪಾರವಾಗಿತ್ತು. ಆದರೆ ನತಾಶಾ ಮಾತ್ರ ಪತಿಯ ಸಾಧನೆ ಬಗ್ಗೆ ಬಿಡಿ, ಟೀಂ ಇಂಡಿಯಾ ಗೆಲುವಿನ ಬಗ್ಗೆಯೂ ಒಂದೇ ಒಂದು ಪೋಸ್ಟ್ ಹಾಕಿಲ್ಲ. ಬದಲಾಗಿ ತಮ್ಮ ಔಟ್ ಫಿಟ್ ಬಗ್ಗೆ ಫೋಟೋ ಪೋಸ್ಟ್ ಮಾಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಇಂತಹ ಪೋಸ್ಟ್ ಎಲ್ಲಾ ಹಾಕುವ ನೀವು ನಿಮ್ಮ ಪತಿ ಹಾರ್ದಿಕ್ ಪಾಂಡ್ಯ ಸಾಧನೆಗೆ ಒಂದೇ ಒಂದು ಮೆಚ್ಚುಗೆಯ ಕಾಮೆಂಟ್ ಕೂಡಾ ಮಾಡಲ್ವಾ? ನೀವು ನಿಜವಾಗಿಯೂ ಹಾರ್ದಿಕ್ ಜೊತೆಗೇ ಇದ್ದೀರಾ ಅಥವಾ ಬೇರೆಯಾಗಿದ್ದೀರಾ? ನಿಮ್ಮ ಇಂತಹ ಪೋಸ್ಟ್ ಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಬೇರೆಯಾಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಇಬ್ಬರೂ ಅಧಿಕೃತವಾಗಿ ಏನೂ ಹೇಳಿಲ್ಲ. ಆದರೆ ಈಗ ಭಾರತ ವಿಶ್ವಕಪ್ ಗೆಲುವಿನ ಸಂದರ್ಭದಲ್ಲೂ ಒಂದೇ ಒಂದು ಪೋಸ್ಟ್ ಮಾಡಿಲ್ಲದೇ ಇರುವುದು ನೋಡಿದರೆ ರೂಮರ್ ಗಳು ನಿಜವೇನೋ ಅನಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆದ್ದ ಮರುದಿನವೇ ಜಸ್ಪ್ರೀತ್ ಬುಮ್ರಾಗೆ ಸರ್ಪೈಸ್ ಕೊಟ್ಟ ಪತ್ನಿ ಸಂಜನಾ ಗಣೇಶನ್