Publish Date: Sat, 22 Jan 2022 (10:00 IST)
Updated Date: Sat, 22 Jan 2022 (10:11 IST)
ಮುಂಬೈ: ಐಪಿಎಲ್ 2022 ಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಅಹಮ್ಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ.
ಈ ವಿಚಾರವನ್ನು ಖುದ್ದು ಹಾರ್ದಿಕ್ ಪಾಂಡ್ಯ ತಿಳಿಸಿದ್ದು, ತಮ್ಮ ಜೊತೆಗೆ ರಶೀದ್ ಖಾನ್, ಶುಬ್ನಂ ಗಿಲ್ ಕೂಡಾ ಅಹಮ್ಮದಾಬಾದ್ ತಂಡಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಈ ಹೊಸ ತಂಡದೊಂದಿಗೆ ಹೊಸ ಪ್ರಯಾಣ ಶುರು ಮಾಡಲು ಖುಷಿಯಾಗುತ್ತಿದೆ. ತಂಡದ ಯಶಸ್ಸಿಗೆ ನನ್ನೆಲ್ಲಾ ಪ್ರಯತ್ನ ಪಡುವುದಾಗಿ ಹಾರ್ದಿಕ್ ಹೇಳಿದ್ದಾರೆ.