Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಾನು ಯಾರ ಕಾಲಿಗೂ ಬೀಳಲ್ಲ, ಯಾರೂ ತನ್ನ ಕಾಲಿಗೆ ಬೀಳಲೂ ಬಿಡಲ್ಲ: ಇದು ಗಂಭೀರ್ ಲಾಜಿಕ್

Gautam Gambhir

Krishnaveni K

ನವದೆಹಲಿ , ಬುಧವಾರ, 5 ಜೂನ್ 2024 (12:14 IST)
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಗ್ಗೆ ಇಂಟ್ರೆಸ್ಟಿಂಗ್
ಸಂಗತಿಯೊಂದನ್ನು ಅವರು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರು ಯಾವತ್ತೂ ಬೇರೆಯವರ ಕಾಲಿಗೆ ಬೀಳಲ್ಲ, ತಮ್ಮ ಕಾಲಿಗೆ ಯಾರೂ ಬೀಳುವುದನ್ನೂ ಇಷ್ಟಪಡವಲ್ವಂತೆ.


ಅದಕ್ಕೆ ಕಾರಣವೂ ಇದೆ. ಯಾರೂ ಗಾಡ್ ಫಾದರ್ ಇಲ್ಲದೇ ಪ್ರತಿಭೆಯಿಂದ ಕ್ರಿಕೆಟಿಗನಾಗಿ ಪ್ರವರ್ಧಮಾನಕ್ಕೆ ಬಂದವರು ಗೌತಮ್ ಗಂಭೀರ್. ಚಿಕ್ಕಂದಿನಿಂದಲೇ ಒಂದು ರೀತಿಯಲ್ಲಿ ಆಕ್ರಮಣಕಾರೀ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದರು.

ಹಿಂದೊಮ್ಮೆ ಅಂಡರ್ 14 ತಂಡಕ್ಕೆ ಆಯ್ಕೆಯಾಗಲು ಆಯ್ಕೆಗಾರರ ಕಾಲಿಗೆ ಬೀಳಬೇಕು ಎಂದು ಅವರಿಗೆ ಆದೇಶಿಸಿದ್ದರಂತೆ. ಆದರೆ ಆಯ್ಕೆಗಾರರ ಕಾಲಿಗೆ ಬಿದ್ದು ನಮಸ್ಕರಿಸಲು ಗಂಭೀರ್ ಒಪ್ಪಿರಲಿಲ್ಲ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ ಎಂದು ಅವರೇ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಬಳಿಕ ಗಂಭೀರ್ 2007 ಮತ್ತು 2011 ರ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಈಗ ಇತಿಹಾಸ. ಇದೀಗ ಐಪಿಎಲ್ ನಲ್ಲೂ ಎರಡು ಬಾರಿ ನಾಯಕರಾಗಿ ಒಮ್ಮೆ ಮೆಂಟರ್ ಆಗಿ ಚಾಂಪಿಯನ್ ಶಿಪ್ ಗೆಲ್ಲಿಸಿಕೊಟ್ಟ ಗರಿಮೆ ಅವರದ್ದು.

ಅವರ ಈ ಸ್ವಾಭಿಮಾನದ ಸ್ವಭಾವದಿಂದ ಎಷ್ಟೋ ಜನರಿಗೆ ನಿಷ್ಠುರವಾದಿಯಾಗಿ ಕಾಣಿಸಿಕೊಂಡಿದ್ದು ಇದೆ. ಇದು ಎಷ್ಟರ ಮಟ್ಟಿಗೆ ಎಂದರೆ ಅವರು ಈಗ ಹಿರಿಯ ಕ್ರಿಕೆಟಿಗ ಎನ್ನುವ ಕಾರಣಕ್ಕೆ ಯಾರೂ ಅವರ ಕಾಲು ಹಿಡಿದು ನಮಸ್ಕರಿಸಲೂ ಬಿಡುವುದಿಲ್ಲವಂತೆ. ತಾನು ಯಾರ ಕಾಲಿಗೂ ಬೀಳಲ್ಲ, ಹಾಗೇ ತನ್ನ ಕಾಲಿಗೂ ಯಾರೂ ಬೀಳುವುದು ಬೇಡ ಎಂಬ ಪಾಲಿಸಿ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಮುನಿಸು ಮುಂಬೈಗೆ: ಟೀಂ ಇಂಡಿಯಾ ನೆಟ್ಸ್ ನಲ್ಲಿ ರೋಹಿತ್, ಹಾರ್ದಿಕ್ ಫ್ರೆಂಡ್ ಶಿಪ್