ನ್ಯೂಯಾರ್ಕ್: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ನಡುವೆ ಶೀತಲ ಸಮವರವಿತ್ತು. ಆದರೆ ಭಾರತ ತಂಡಕ್ಕೆ ಬಂದ ಮೇಲೆ ಇಬ್ಬರ ಮುನಿಸು ಕರಗಿ ಸ್ನೇಹ ಮೂಡಿದೆ.
ಟಿ20 ವಿಶ್ವಕಪ್ ತಂಡದಲ್ಲಿ ರೋಹಿತ್ ನಾಯಕರಾದರೆ, ಹಾರ್ದಿಕ್ ಉಪ ನಾಯಕರಾಗಿದ್ದಾರೆ. ಹೀಗಾಗಿ ಇಬ್ಬರೂ ಸಂಯೋಗದಿಂದ ತಂಡವನ್ನು ಮುನ್ನಡೆಸಬೇಕಿದೆ. ಮುಂಬೈ ತಂಡದಲ್ಲಿದ್ದಾಗ ಇಬ್ಬರೂ ನೆಟ್ಸ್ ನಲ್ಲಿ ಒಬ್ಬರಿಗೊಬ್ಬರು ಜೊತೆಗೆ ಅಭ್ಯಾಸ ನಡೆಸುವುದೂ ಕಂಡುಬರಲಿಲ್ಲ.
ಆದರೆ ಈಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಗಾಗಿ ತಯಾರಿ ನಡೆಸುತ್ತಿರುವಾಗ ರೋಹಿತ್ ಮತ್ತು ಹಾರ್ದಿಕ್ ನೆಟ್ಸ್ ನಲ್ಲಿ ಸೌಹಾರ್ದಯುತವಾಗಿ ಕಾಲ ಕಳೆದಿದ್ದಾರೆ. ಹಾರ್ದಿಕ್ ಬೌಲಿಂಗ್ ಮಾಡಿದರೆ ರೋಹಿತ್ ಅವರ ಜೊತೆಗೇ ಒಂದೇ ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಬಳಿಕ ಇಬ್ಬರೂ ಕೆಲವು ಸಮಯ ಚರ್ಚೆ ನಡೆಸಿದ್ದಾರೆ.
ಈ ಮೂಲಕ ಐಪಿಎಲ್ ನಲ್ಲಿ ಮೂಡಿದ್ದ ಮುನಿಸು ರಾಷ್ಟ್ರೀಯ ತಂಡಕ್ಕೆ ಬಂದಾಗ ಮರೆಯಾಗಿದೆ ಎನ್ನಬಹುದು. ಇಬ್ಬರೂ ಜೊತೆಯಾಗಿ ಆಡಿದರೆ ಮಾತ್ರ ಭಾರತದ ಕಪ್ ಗೆಲ್ಲುವ ಕನಸು ನನಸಾಗಲು ಸಾಧ್ಯ.