Publish Date: Tue, 06 Jun 2017 (12:41 IST)
Updated Date: Tue, 06 Jun 2017 (12:45 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಇದೀಗ ಅರ್ಜಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ನಾನು ಖರೀದಿ ಮಾಡಲಾಗದಷ್ಟು ದುಬಾರಿ ಎಂದು ಆಸೀಸ್ ನ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹೇಳಿದ್ದಾರೆ.
ನಾನು ಟೀಂ ಇಂಡಿಯಾ ಕೋಚ್ ಆಗಲು ಆಸಕ್ತಿ ಹೊಂದಿದ್ದೇನೆ. ನಾಯಕ ಕೊಹ್ಲಿ ಜತೆ ಉತ್ತಮ ಜತೆಯಾಟವಾಡುವೆ. ಆದರೆ ಬಿಸಿಸಿಐಗೆ ನನ್ನ ಖರೀದಿ ಮಾಡಲು ಸಾಧ್ಯವಿಲ್ಲ. ಅಷ್ಟು ದುಬಾರಿ ನಾನು ಎಂದು ಶೇನ್ ಹೇಳಿಕೊಂಡಿದ್ದಾರೆ.
ಹಾಲಿ ಕೋಚ್ ಅನಿಲ್ ಕುಂಬ್ಳೆ ಗುತ್ತಿಗೆ ಅವಧಿ ಮುಗಿಯುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಕೋಚ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗೆ ಈಗಾಗಲೇ ಟಾಮ್ ಮೂಡಿ, ಕ್ರೆಗ್ ಮೆಕ್ ಡರ್ಮೆಟ್, ವೀರೇಂದ್ರ ಸೆಹ್ವಾಗ್, ದೊಡ್ಡ ಗಣೇಶ್, ಹಾಗೂ ಅನಿಲ್ ಕುಂಬ್ಳೆ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಯಾರು ಟೀಂ ಇಂಡಿಯಾಗೆ ಹೊಸ ಗುರುವಾಗುತ್ತಾರೋ ಕಾದು ನೋಡಬೇಕು.
Krishnaveni K
Publish Date: Tue, 06 Jun 2017 (12:41 IST)
Updated Date: Tue, 06 Jun 2017 (12:45 IST)