Publish Date: Fri, 22 Oct 2021 (08:04 IST)
Updated Date: Fri, 22 Oct 2021 (06:07 IST)
ಲಂಡನ್, ಅ. 22 : ಐಸಿಸಿ ಟ್ವೆಂಟಿ-20 ವಿಶ್ವಕಪ್ನ ಅಭ್ಯಾಸ ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನ ನೀಡಿರುವುದನ್ನು ನೋಡಿದರೆ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡದಂತೆ ಕಾಣುತ್ತದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ತನ್ನ ಎರಡು ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳನ್ನು ಸೋಲಿಸಿದೆ.
ಭಾರತದ ಪರಿಪೂರ್ಣ ಪ್ರದರ್ಶನದಿಂದ ಪ್ರಭಾವಿತರಾಗಿರುವ ಮೈಕಲ್ ವಾನ್, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಟಿ-20 ವಿಶ್ವಕಪ್ಅನ್ನು ಎತ್ತಲು ಸರ್ವರೀತಿಯಿಂದಲೂ ಸಜ್ಜಾ ಗಿರುವಂತೆ ಕಾಣುತ್ತಿದೆ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.