ಮುಂಬೈ: ದ.ಆಫ್ರಿಕಾಗೆ ತೆರಳುವ ಮುನ್ನ ಮಾಧ್ಯಮ ಸಂದರ್ಶನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೀಡಿದ ಹೇಳಿಕೆ ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಏಕದಿನ ನಾಯಕತ್ವದಿಂದ ತಮ್ಮನ್ನು ಪದಚ್ಯುತಗೊಳಿಸಿ ರೋಹಿತ್ ರನ್ನು ನಾಯಕರಾಗಿ ನೇಮಿಸಿರುವುದರ ಬಗ್ಗೆ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಬಲವಂತದಿಂದ ಕೊಡಿಸಲಾಗಿದೆ ಎಂದು ಕೊಹ್ಲಿ ಅಭಿಮಾನಿಗಳು ಆಕ್ಷೇಪಿಸಿದ್ದಾರೆ.
ರೋಹಿತ್ ಐಪಿಎಲ್ ಮತ್ತು ಟೀಂ ಇಂಡಿಯಾ ನಾಯಕರಾಗಿ ಯಶಸ್ವಿಯಾಗಿದ್ದಾರೆ. ದ್ರಾವಿಡ್ ಕೂಡಾ ಅತ್ಯುತ್ತಮವಾಗಿ ನಿರ್ವಹಣಾ ಕೌಶಲ್ಯ ಹೊಂದಿದ್ದಾರೆ. ಇವರಿಬ್ಬರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾಗೆ ನನ್ನ ಸಂಪೂರ್ಣ ಬೆಂಬಲವಿರಲಿದೆ ಎಂದು ಕೊಹ್ಲಿ ಹೇಳಿಕೆ ನೀಡಿದ್ದರು.
ಆದರೆ ಏಕದಿನ ನಾಯಕತ್ವದಿಂದ ಪದಚ್ಯುಗೊಂಡ ನಂತರ ಕೊಹ್ಲಿ ಅಸಮಾಧಾನಕ್ಕೀಡಾಗಿದ್ದಾರೆ ಎಂಬ ವಿವಾದ ತಣ್ಣಗಾಗಿಸಲು ಬಿಸಿಸಿಐ ಅವರಿಂದ ಈ ರೀತಿ ಹೇಳಿಕೆ ನೀಡಿಸಿದೆ ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.