ಸಿಡ್ನಿ: ಆಸ್ಟ್ರೇಲಿಯಾ ಸರಣಿಯಲ್ಲಿ ಪಾಲ್ಗೊಳ್ಳಲು ಸಿಡ್ನಿಗೆ ಬಂದಿಳಿದಿರುವ ರೋಹಿತ್ ಶರ್ಮಾ ಸದ್ಯಕ್ಕೆ ಇಲ್ಲಿ ಕ್ವಾರಂಟೈನ್ ಅವಧಿ ಪೂರೈಸುತ್ತಿದ್ದಾರೆ. ಈ ನಡುವೆ ಇಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಮೆಲ್ಬೋರ್ನ್ ನಲ್ಲಿ ಅವರು ಮತ್ತೆ ಕ್ವಾರಂಟೈನ್ ಗೊಳಗಾಗಲಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.
ಒಂದು ವೇಳೆ ಕೊರೋನಾ ಹಾವಳಿ ಮಿತಿಮೀರಿದರೆ ಮೂರನೇ ಟೆಸ್ಟ್ ನ್ನು ಸಿಡ್ನಿಯಿಂದ ಮೆಲ್ಬೋರ್ನ್ ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ರೋಹಿತ್ ಮೆಲ್ಬೋರ್ನ್ ಗೆ ತೆರಳಿ ಮತ್ತೆ ಕ್ವಾರಂಟೈನ್ ಗೊಳಗಾಗಬೇಕೇ ಎಂಬ ಅನುಮಾನಗಳಿತ್ತು. ಆದರೆ ಮೂಲಗಳ ಪ್ರಕಾರ ರೋಹಿತ್ ರನ್ನು ಮತ್ತೆ ಕ್ವಾರಂಟೈನ್ ಗೆ ಒಳಗಾಗಿಸುವ ಸಾಧ್ಯತೆ ಕಡಿಮೆ. ಮತ್ತೆ ಕ್ವಾರಂಟೈನ್ ಎಂದರೆ ರೋಹಿತ್ ಮೂರನೇ ಟೆಸ್ಟ್ ನಲ್ಲಿ ಪಾಲ್ಗೊಳ್ಳಲು ಕಷ್ಟವಾಗಲಿದೆ.