Publish Date: Thu, 24 Jun 2021 (09:54 IST)
Updated Date: Thu, 24 Jun 2021 (09:55 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಮಳೆಯ ನಡುವೆ ಇಂಗ್ಲೆಂಡ್ ನ ಸೌಥಾಂಪ್ಟನ್ ನಲ್ಲಿ ನಡೆಸಿ ಅವಾಂತರ ಮಾಡಿದ ಐಸಿಸಿ ಮೇಲೆ ಮಾಜಿ ಕ್ರಿಕೆಟಿಗರು ಗರಂ ಆಗಿದ್ದಾರೆ.
ಪ್ರತಿಷ್ಠಿತ ಐಸಿಸಿ ಟೂರ್ನಿಯ ಫೈನಲ್ ಪಂದ್ಯ, ಅದರಲ್ಲೂ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪಂದ್ಯವನ್ನು ಇಂತಹ ತಾಣದಲ್ಲಿ ನಡೆಸಿರುವುದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟೆಸ್ಟ್ ಕ್ರಿಕೆಟ್ ನ ರೋಚಕತೆ ಹೆಚ್ಚಿಸುವ ಸಲುವಾಗಿಯೇ ಈ ಕೂಟ ನಡೆಸಲಾಗುತ್ತಿದೆ.
ಆದರೆ ಮಳೆಯಿಂದಾಗಿ ಆಟದ ರೋಚಕತೆಯೂ ನೀರುಪಾಲಾಗಿದೆ. ಜೊತೆಗೆ ಒಂದು ತಂಡಕ್ಕೆ ಅನ್ಯಾಯವಾಗುತ್ತದೆ. ಪೂರ್ವ ಯೋಜನೆಯಿಲ್ಲದೇ ಇಂತಹ ತಾಣದಲ್ಲಿ ಕೂಟ ನಡೆಸಿರುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಆಕಾಶ್ ಚೋಪ್ರಾ, ಸಂಜಯ್ ಬಂಗಾರ್, ಕಿವೀಸ್ ಮಾಜಿ ವೇಗಿ ಶೇನ್ ಬಾಂಡ್ ಅಸಮಾಧಾನ ಹೊರಹಾಕಿದ್ದಾರೆ.