Publish Date: Wed, 23 Jun 2021 (16:21 IST)
Updated Date: Wed, 23 Jun 2021 (16:28 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ದಿನ ಸೋಲಿನ ಭೀತಿಗೆ ಸಿಲುಕಿದೆ.
ಇತ್ತೀಚೆಗಿನ ವರದಿ ಬಂದಾಗ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿರುವ ಟೀಂ ಇಂಡಿಯಾ ಕೇವಲ 67 ರನ್ ಗಳ ಮುನ್ನಡೆಯಲ್ಲಿದೆ. ಇದೀಗ ರಿಷಬ್ ಪಂತ್ 17 ಮತ್ತು ಉಪನಾಯಕ ಅಜಿಂಕ್ಯಾ ರೆಹಾನೆ 9 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಸದ್ಯಕ್ಕೆ ವಿಕೆಟ್ ಕಳೆದುಕೊಳ್ಳದಂತೆ ಕಾಪಾಡುವ ಒತ್ತಡ ಭಾರತದ ಮೇಲಿದೆ. ಆದರೆ ಪ್ರಮುಖ ನಾಲ್ಕು ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿಕೊಂಡಿರುವುದು ಭೀತಿಗೆ ಕಾರಣವಾಗಿದೆ. ಚೇತೇಶ್ವರ ಪೂಜಾರ 15, ವಿರಾಟ್ ಕೊಹ್ಲಿ 13 ರನ್ ಗಳಿಸಿ ಜೆಮಿಸನ್ ಗೆ ವಿಕೆಟ್ ಒಪ್ಪಿಸಿದರು. ಟಿಮ್ ಸೌಥಿ ಮತ್ತು ಜೆಮಿಸನ್ ತಲಾ 2 ವಿಕೆಟ್ ಕಬಳಿಸಿದ್ದಾರೆ.