ಮುಂಬೈ: ಭಾರತ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ಕನಸಿನ ಕೂಸಾದ ನಾಲ್ಕು ದೇಶಗಳ ಏಕದಿನ ಸೂಪರ್ ಸೀರೀಸ್ ನಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಕೂಡಾ ಆಸಕ್ತಿ ವಹಿಸಿದೆ.
ಐಸಿಸಿ ಟೂರ್ನಿಗೆ ಸೆಡ್ಡು ಹೊಡೆಯುವಂತೆ ಪ್ರತೀ ವರ್ಷ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಜಾಗತಿಕ ಕ್ರಿಕೆಟ್ ನ ನಾಲ್ಕು ದೈತ್ಯ ರಾಷ್ಟ್ರಗಳ ತಂಡಗಳ ನಡುವೆ ಸೂಪರ್ ಸೀರೀಸ್ ಒಂದನ್ನು ಆಯೋಜಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸಿವೆ.
ಅದರಂತೆ 2021 ರಿಂದ ಇಂತಹದ್ದೊಂದು ಸರಣಿ ಆಯೋಜಿಸಲು ಉಭಯ ಕ್ರಿಕೆಟ್ ಮಂಡಳಿಗಳು ಚಿಂತನೆ ನಡೆಸಿವೆ. ಇದೀಗ ಈ ಎರಡೂ ಕ್ರಿಕೆಟ್ ಮಂಡಳಿಗಳ ಯೋಜನೆಗೆ ಇಂಗ್ಲೆಂಡ್ ಕೂಡಾ ಕೈ ಜೋಡಿಸಿದ್ದು, ಇನ್ನೊಂದು ಅಗ್ರ ಶ್ರೇಯಾಂಕದ ತಂಡ ಕೂಡಾ ಈ ಸೂಪರ್ ಸರಣಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.